ಕಳಸ ಬಂಡೂರಿ ಹೋರಾಟ ಕುಡಿಯುವ ನೀರಿನ ಹೋರಾಟ, ಇದು ಪ್ರಾರಂಭವಾಗಿ ವರ್ಷ ಕಳೆಯುತ್ತಾ ಬಂದರು ನ್ಯಾಯ ಮಾತ್ರ ಮರೀಚಿಕೆ. ಗೆಳೆಯರೇ ಜಗತ್ತಿನ ಇತಿಹಾಸದೊಳು ಒಂದು ವರ್ಷದಷ್ಟು ನಿರಂತರವಾಗಿ ಹೋರಾಟ ಯಾವುದು ಆಗಿಲ್ಲ ಇದೆ ಮೊದಲು ಇದನ್ನು ಹೇಳಿಕೊಳ್ಳುವದಕ್ಕೆ ದುಃಖ ಮಾತು ನಾಚಿಕೆ ಆಗಬೇಕು ನಮಗೆ, ಬನ್ನಿ ಗೆಳೆಯರೇ ನಮ್ಮೆಲ್ಲ ಪ್ರೊಫೈಲ್ ಪಟದಲ್ಲಿ ಇದನ್ನು ಸೇರಿಸಿಕೊಂಡು ಅವರ ಹೋರಾಟದ ಕೂಗಿಗೆ ಜೊತೆಯಾಗೋಣ. ಜೈ ಮಹಾದಾಯಿ ಮಲಪ್ರಭೆ, ಜೈ ಕರ್ನಾಟಕ.
ನಮ್ಮ ನದಿ ನೀರನ್ನ ನಾವುಗಳು ಬಳಸಲು ಬೇರೆಯವರ ಅಪ್ಪಣೆ ಪಡೆಯುವ ದೌರ್ಭಗ್ಯ ನಮಗೆ ಎದಿರಾಗಿದೆ ಗೆಳೆಯರೇ. ಇಲ್ಲಿವರೆಗೆ ಕಳಸ ಬಂಡೂರಿ ರೈತರ ಪ್ರತಿಭಟನೆಯಲ್ಲಿ ಮೂರಕ್ಕಿಂತ ಹೆಚ್ಚು ರೈತರು ಪ್ರಾಣವನ್ನ ಕಳೆದುಕೊಂಡು ಹುತಾತ್ಮರಾಗಿದ್ದಾರೆ, ಇದು ಭಾರತದ ಇತಿಹಾಸದಲ್ಲಿ ಕರಾಳ ದಿನಗಳವು.
ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ. ದೂರದ ಪಶ್ಚಿಮ ಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ. ದೂರ ಹರಿದು ಮುಂದೆ ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ. ಗೋವಾದಲ್ಲಿ ಇದನ್ನು ಮಾಂಡೋವಿ ನದಿ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ನದಿ ಗೋವಾದಲ್ಲಿ 52 ಕಿ.ಮೀ. ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಸಮೀಪದಲ್ಲೇ 4 ಕಿ.ಮೀ. ಅಂತರದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಮಲಪ್ರಭ ನದಿ ಇದೆ. ಈ ನದಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಅಸರೆಯಾಗಿದೆ. ಈ ನದಿಯಲ್ಲಿ ನಿರಿನ ಹರಿವಿನ ಪ್ರಮಾಣ ಕಡಿಮೆ ಇದ್ದು ಹುಬ್ಬಳ್ಳಿ ಧಾರವಾಡ ಗದಗ ಜನವಸತಿ ಪ್ರದೇಶಗಳಿಗೆ 10-15 ದಿನಗಳಿಗೊಮ್ಮೆ ಕುಡಿಯುವ ಸರಬರಾಜು ಮಾಡುವ ಶೋಚನಿಯ ಸ್ಥಿತಿ ಇದೆ. ಅದ್ದರಿ ಕೇವಲ 4 ಕಿ.ಮೀ. ಅಂತರ ಇರುವ ಕಳಸ ಬಂಡೂರ ಎಂಬಲ್ಲಿ ಮಹದಾಯಿ ನದಿಗೆ ಹರಿಯುವ ನಾಲೆಯನ್ನು ಮಲಪ್ರಭ ನದಿಗೆ ಸೇರಿಸುವದೇ ಕಳಸ ಬಂಡೂರಿ ಯೋಜನೆಯಾಗಿದೆ. ಅದರೆ ಗೋವ ರಾಜ್ಯ ಹೀಗೆ ಮಾಡುದರಿಂದ ಮಹದಾಯಿ ನದಿ (ಮಾಂಡೋವಿ ನದಿ) ನೀರು ಕಡಿಮೆಯಾಗಿ ಅರಣ್ಯ ಮತ್ತು ಪ್ರಾಣಿ ಪಕ್ಷಿಗಳಿಗೆ ಹಾನಿಯಾಗುತ್ತದೆ ಎಂದು ಈ ಯೋಜನೆಗೆ ಅಡ್ಡಿ ಪಡಿಸುತ್ತಿದೆ. ವಾಸ್ತವದಲ್ಲಿ ಇದು ಗೋವ ರಾಜ್ಯಕ್ಕೆ ಯಾವುದೇ ತೊಂದರೆ ಯಾಗದೆ ಕೇವಲ ಸಮುದ್ರ ಸೇರುವ ಸ್ವಲ್ಪ ಪ್ರಮಾಣದ ನೀರನ್ನು ನಾವು ಕುಡಿಯಲು ಪಡೆಯುವ ಯೋಜನಾಯಾಗಿದೆ.
ಗೆಳೆಯರೇ ಈ ಬ್ಯಾಡ್ಜ್ ಅನ್ನು ಎಲ್ಲ ಕಡೆಗೂ ಹಂಚಿ ನಮ್ಮ ಹೋರಾಟಕ್ಕೆ ನೀವು ಕೈಗೂಡಿಸುವುದಾದಲ್ಲಿ ನಿಮ್ಮ ನಂಬರನ್ನು 8867734326 ಕಳುಹಿಸಿ.
|
Created: ಶಿವಾನಂದ ಗುಂಡಾನವರ on 29th June 2016 |
|